📰 ಜನವರಿ-05: ಕೋಟೇಶ್ವರಾಚ್ಯಾ ಸಾಂ ಅಂತೊನ್ ಫಿರ್ಗಜೆಚ್ಯಾ ವಾರ್ಶಿಕ್ ಫೆಸ್ತಾ ಸಂದರ್ಭಿಂ 06ವೆರ್ ಬುದ್ವಾರಾ ಸಾಂಜೆರ್ ಕಟ್ಕೆರೆಚ್ಯಾ ಕಾರ್ಮೆಲ್ ಆಶ್ರಮಾಂತ್ ಕಾರ್ಮೆಲಿತ್ ಫ್ರಾದ್ ಜೊ.ಸಿ.ಸಿದ್ದಕಟ್ಟೆ ವಿರಚಿತ್ ಆನಿ ನಿರ್ದೇಶಿತ್ ನವೊ ಕೊಂಕ್ಣಿ ಹಾಸ್ಯ್ ನಾಟಕ್ – ’ಅಮರ್ ಅಂತೋಣಿ’ ಪ್ರದರ್ಶಿತ್ ಜಾಲೊ. ಪ್ರಸ್ತುತ್ ಯುವಜಣಾಂ ಮಧೆಂ ಬೆಕಾರ್’ಪಣಾಚೊ ವಿಶಯ್ ಮುಕಾರ್ ದವ್ರುನ್ ಹಾಸ್ಯಾಭರಿತ್ ಸನ್ನಿವೆಶಾಂನಿ ವಿಣ್ಲಲೊ ನಾಟಕ್ ಪ್ರೇಕ್ಶಕಾಂಚೆ ಮೆಚ್ವಣೆಕ್ ಪಾತ್ರ್ ಜಾಲೊ ಮಾತ್ರ್ ನ್ಹಯ್ ಬರ್‍ಯಾ ಲಿಸಾಂವಾನ್ ತೃಪ್ತ್ ಕರಿಲಾಗ್ಲೊ.ನಮ್ಮ ಹ್ರದಯ ಕತ್ತರಿಯೂ ಆಗಬಹುದು, ಸೂಜಿಯೂ ಆಗಬಹುವುದು. ಹ್ರದಯ ಬೆಸೆಯುವ ಸೂಜಿಯಂತೆ ಸೌಹಾರ್ದದಿಂದ ಮನಸ್ಸುಗಳನ್ನು ಕಟ್ಟೋಣ” ಎಂದು ಸಹಬಾಳ್ವೆ ಕಾರ್ಯಕ್ರಮದಲ್ಲಿ ರಫೀಕ್ ಮಾಸ್ಟರ್ ನುಡಿದರು. ಅವರು ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ’ಸಹಬಾಳ್ವೆ’ ಭಾವೈಕ್ಯದ ಕಾರ್ಯಕ್ರಮ ಉದ್ದೇಷಿಸಿ ಮಾತಾಡುತ್ತಿದ್ದರು. “ಹಚ್ಚುವುದಾದರೆ ದೀಪ ಹಚ್ಚು, ಬೆಂಕಿಯಲ್ಲ. ಆರಿಸುವುದಾದರೆ ನೋವನ್ನು ಆರಿಸು, ನಗುವನ್ನಲ್ಲ” ಎಂಬ ಕವಿತೆಯನ್ನುಲ್ಲೇಕಿಸುತ್ತಾ ಸಹಬಾಳ್ವೆ ಕಾರ್ಯಕ್ರಮದ ಉದ್ದೇಶ ’ಮನಸ್ಸುಗಳನ್ನು ಕಟ್ಟುವ ಕೆಲಸ’. ಈ ಪುಣ್ಯಕಾರ್ಯ ಪುಣ್ಯಕ್ಷೇತ್ರದಿಂದ ಆರಂಭವಾಗಿದ್ದು ಅತೀವ ಸಂತಸ ತಂದಿದೆ. ಸಮಾಜದ ನೋವುಗಳಿಗೆ ಈ ಕಾರ್ಯಕ್ರಮ ಸ್ಪಂದಿಸಲಿ ಎಂದು ಹಾರೈಸಿದರು. ’ಸಹಬಾಳ್ವೆ’ ಕಾರ್ಯಕ್ರಮ ಧರ್ಮ, ಜನಜೀವನ ಹಾಗೂ ಸಂಬಂಧಗಳ ಬೆಸೆಯುವ ಕಾರ್ಯಕ್ರಮವಾಗಿದ್ದು ಜನವರಿ 4, ಶನಿವಾರ ಫುಣ್ಯಕ್ಷೇತ್ರದ ಆವರಣದಲ್ಲಿ ಸಂಜೆ 6 ಗಂಟೆಗೆ ನೆರವೇರಿತು. ಅತಿಥಿಗಳಾದ ರಫೀಕ್ ಮಾಸ್ಟರ್, ಸುನೀಲ್ ಕುಮಾರ್ ಬಜಾಲ್ ಹಾಗೂ ಎಮ್ಮೆಲ್ಸಿ ಐವನ್ ಡಿ ಸೋಜಾ ತಮ್ಮ ಸಂದೇಶ ನೀಡಿದರು.

ರಫೀಕ್ ಮಾಸ್ಟರ್ ಮಾತಾಡುತಿದ್ದಂತೆ ಅಜಾನ್ ಕೇಳಿ ಬಂದು ನೆರೆದ ಭಕ್ತಾದಿಗಳು ಮಾತು ನಿಲ್ಲಿಸಿ ಗೌರವ ಸಲ್ಲಿಸಲು ಸೂಚಿಸಿದ ಅಪರೂಪದ ಘಟನೆಯೂ ನಡೆಯಿತು. ಭಕ್ತಾದಿಗಳ ಈ ನಡೆಯನ್ನು ಶ್ಲಾಘಿಸಿ ರಫೀಕ್ ಮಾಸ್ಟರ್ ಇದು ಸಹಬಾಳ್ವೆಗೆ ಉತ್ತಮ ಸಾಕ್ಶಿ ಎಂದು ನುಡಿದರು.
“ದ್ವೇಷ ಹಂಚುವವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ, ಪ್ರೀತಿ ಹಂಚುವವರು ಕೆಲವರಾಗಿದ್ದರೂ ಅವರು ಅದನ್ನು ನಿಲ್ಲಿಸಿದ ದಿನ ಸಹಬಾಳ್ವೆ ಮತ್ತಷ್ಟು ಕೆಡುತ್ತದೆ. ಹಾಗಾಗಿ ಪ್ರೀತಿ ಹಂಚುವವರು ಬೆಳೆಯಲಿ” ಎಂದು ಸುನೀಲ್ ಕುಮಾರ್ ಬಜಾಲ್ ತಮ್ಮ ಆಶಯ ವ್ಯಕ್ತಪಡಿಸಿದರು. ರಫೀಕ್ ಮಾಸ್ಟರ್ ಮಾತಿಗೆ ಮನದೂಗುತ್ತಾ, ’ಸೂಜಿಯೋ, ಕತ್ತರಿಯೋ, ಅದನ್ನು ಬಳಸುವ ಮನಸ್ಸು ಚೆನ್ನಾಗಿದ್ದರಷ್ಟೇ ಸಹಬಾಳ್ವೆ ಸಾಧ್ಯ’ ಎಂದು ಐವನ್ ಡಿ’ ಸೋಜಾ ಕಿವಿಮಾತು ನೀಡಿದರು.
ಸಹಬಾಳ್ವೆ’ ಭಾವೈಕ್ಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಲಶೇಖರ ಚರ್ಚಿನ ಗುರುಗಳಾದ ವಂ. ಕ್ಲಿಫರ್ಡ್ ಫೆರ್ನಾಂಡಸ್; ಬಜ್ಜೋಡಿ ಚರ್ಚಿನ ಗುರುಗಳಾದ ವಂ. ಡೊಮಿನಿಕ್ ವಾಸ್; ಮರೋಳಿ ವಾರ್ಡ್‌ನ ಕಾರ್ಪೋರೇಟರ್ ಶ್ರೀ ಕೇಶವ; ಬೆಂದೂರ್ ವಾರ್ಡ್‌ನ ಕಾರ್ಪೋರೇಟರ್ ಶ್ರೀ ನವೀನ್; ಶ್ರೀ ಭಾಸ್ಕರ, ಕಾರ್ಪೋರೇಟರ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟಾನಿ ಆಲ್ವಾರೆಸ್ ಉಪಸ್ಥಿತರಿದ್ದರು. ಕಾರ್ಮೆಲ್ ಮಠದ ಮಠಾದೀಶರಾದ ವಂ. ಮೆಲ್ವಿನ್ ಡಿ ಕುನ್ಹಾ, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಬಾಲ ಯೇಸು ಪುಣ್ಯಕ್ಷೇತ್ರದ ನಿರ್ದೇಶಕರಾದ ವಂ. ಸ್ಟೀಫನ್ ಪಿರೇರಾ ಕಾರ್ಯಕ್ರಮ ನಡೆಸಿಕೊಟ್ಟರು.















ವರದಿ ಹಾಗೂ ಫೋಟೊ:
ಕಾರ್ಮೆಲ್ ಕಿರಣ್ ಮೀಡಿಯಾ
English 









































































































































































