📰 ಮಾರ್ಚ್ 17: ಹ್ಯಾ ಪಾವ್ಡಿಂ ಕಪ್ ಆಮ್ಚೆಂಚ್ ಮ್ಹಣ್ ರಾಯಲ್ ಚಾಲೆಂಜರ್ಸ್ ಬೆಂಗ್ಳುರ್( RCB) ಟೀಮಾಚಾ ಕೊರೊಡ್ ಅಭಿಮಾನಾಚೆಂ ಘೋಶ್ ವಾಕ್ಶ್ ನೀಜ್ ಜಾಲಾಂ. ಕಿತ್ಯಾಕ್ ಪ್ರಾಂಚೈಸಿ ಲೀಗ್ ಚರಿತ್ರೆಂತ್ ಪಯ್ಲೆಂ ಪಾವ್ಟಿಂ ಚಾಂಪಿಯನ್ ಕುರೊವ್ ಲಾಭ್ಲಾ.

ಆಯ್ತಾರಾ ಮಾರ್ಚ್ 17 ವೆರ್ ಡೆಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಾಮಾಂತ್ ಚಲ್ ಲ್ಲ್ಯಾ 2024, ಸ್ತ್ರೀ ಯಾಂಚಾ ಪ್ರೀಮಿಯರ್ ಲೀಗ್(WPL) ದುಸ್ರ್ಯಾ ಆವೃತ್ತಿಚಾ ಫೈನಲ್ ಮ್ಯಾಚಾಂತ್ ಡೆಲ್ಲಿ ಕ್ಯಾಪಿಟಲ್ಸ್( DC) ಸ್ತ್ರೀಯಾಂಚಾ ಪಂಗ್ಡಾಕ್ ಸಲ್ವೊನ್ ರಾಯಲ್ ಚಾಲೆಂಜರ್ಸ್ ಬೆಂಗ್ಳುರ್( RCB) ಸ್ತ್ರೀ ಯಾಂನಿ ಪಯ್ಲೆ ಪಾವ್ಟಿಂ ಟ್ರೋಫಿ ಉಕ್ಲುನ್ ಚರಿತ್ರಾ ರಚ್ಲ್ಯಾ.
ವಿಶೇಷ್ ಕಿತೆಂಗಿ ಮ್ಹಳ್ಯಾರ್ 2024 ಮಾರ್ಚ್ 19 ವೆರ್ ಮಂಗ್ಳಾರಾ ಬೆಂಗ್ಳುರ್ ಎಂ ಚಿನ್ನ ಸ್ವಾಮಿ ಸ್ಟೇಡಿಯಂತ್ ಚಲ್ಚ್ಯಾ ( ಆರ್ ಸಿಬಿ ಅನ್ ಬಾಕ್ಸ್) ಈವೆಂಟ್ ಪಾರಂಭ್ ಜಾಂವ್ಚ್ಯಾ ಪಯ್ಲೆಂಚ್ ಆರ್ ಸಿಬಿ ಸ್ತ್ರೀ ಯಾಂಚೆ ಟೀಮ್ ಕಪ್ ಘೆವ್ನ್ ಗಾವಾಕ್ ಯೇವ್ನ್ ಪಾವ್ತೆಲೆಂ.

