ಮೌಂಟ್ ಕಾರ್ಮೆಲ್ ಸಿಬಿ‌ಎಸ್ಇ ಶಾಲೆಗೆ 100 ರಷ್ಟು ಫಲಿತಾಂಶ

📰 ಹೂವಿನ ಹಡಗಲಿ: 2024-25ನೇ ಸಾಲಿನ ಸಿಬಿ‌ಎಸ್ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ದೇಶಾದ್ಯಾಂತ ಹೊರಬಿದ್ದಿದೆ. ಪಟ್ಟಣದ ಮೌಂಟ್ ಕಾರ್ಮೆಲ್ ಸಿಬಿ‌ಎಸ್ಇ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ.

ಎಲ್ ಪ್ರಶಾಂತ ಶೇಕಡಾ 92, ಈಶ್ವರಿ ಪಾಟೀಲ್ ಶೇಕಡಾ 85.02, ಎಂ ಅನೀತಾ ಶೇಕಡಾ 85.02, ಯು. ಸಿಂಚನಾ ಶೇಕಡಾ 85.

ಒಟ್ಟು ಮಕ್ಕಳು 37, ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು 12, ಪ್ರಥಮ ಶ್ರೇಣಿಯಲ್ಲಿ 14, ದ್ವಿತೀಯ ಶ್ರೇಣಿಯಲ್ಲಿ 11. ಹೀಗೆ ಶಾಲೆಗೆ 100 ರಷ್ಟು ಫಲಿತಾಂಶ ಬಂದಿದೆ.

ಅಭಿನಂದನೆ: ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಫಾದರ್ ವಿಕ್ಟರ್ ವಿಜಯ್ ಪಾಯ್ಸ್, ಸಂಚಾಲಕರಾದ ಫಾದರ್ ಡೆನ್ಜಿಲ್ ವೇಗಸ್, ಸೇರಿದಂತೆ ಪಾಲಕ ಪೋಷಕರು, ಕರ್ನಾಟಕ ಪ್ರೆಸ್ ಕ್ಲಬ್, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಮತ್ತು ಶಾಲಾ ಸಂಸ್ಥೆಯ ಪದಾಧಿಕಾರಿಗಳು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ಮೌಂಟ್ ಕಾರ್ಮೆಲ್ ಶಾಲೆಯನ್ನು ಕಾರ್ಮೆಲ್ ಜ್ಞಾನ ಎಜುಕೇಶನ್ ಟ್ರಸ್ಟ್ ನಿರ್ವಹಿಸುತ್ತಿದ್ದು, ಇದು ಕರ್ನಾಟಕ-ಗೋವಾ ಪ್ರಾಂತ್ಯದ ಕ್ಯಾಥೋಲಿಕ್ ಕಾರ್ಮೆಲೈಟ್ ಫಾದರ್‌ಗಳ ಚಲಾವಣೆಯಲ್ಲಿರುವ ಅಲ್ಪಸಂಖ್ಯಾತ ಸಂಸ್ಥೆಯಾಗಿದೆ.
ಯೇಸು ಕ್ರಿಸ್ತನು ಸೇವೆ ಮಾಡಲು ಬಂದವನು ಎಂಬ ಅವನ ಹಾದಿಯಲ್ಲಿ ನಾವು ನಡೆಯುತ್ತಾ, ಧರ್ಮ, ಜಾತಿ ಅಥವಾ ಸಾಮಾಜಿಕ ಸ್ಥಿತಿಗತಿಗಳ ಭೇದವಿಲ್ಲದೆ ಎಲ್ಲರಿಗೂ ಪ್ರೀತಿಯಿಂದ ಸೇವೆ ನೀಡಲು ನಾವು ಬಯಸುತ್ತೇವೆ.

ಈ ಟ್ರಸ್ಟ್‌ನ ಪ್ರಮುಖ ಉದ್ದೇಶವು ಸಮಗ್ರ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡಿ ಆಧುನಿಕ ಲೋಕದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ನೀಡುವುದು. ನಮ್ಮ ಗುರಿಯೆಂದರೆ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರಾಗಿಸಲು ತರಬೇತಿ ನೀಡುವುದು. ಈ ಸಂಸ್ಥೆಯು ಮಕ್ಕಳ ಬುದ್ಧಿವಂತಿಕೆ ಮತ್ತು ನೈತಿಕ ಮಟ್ಟವನ್ನು ನಿರಂತರವಾಗಿ ಉತ್ತಮಗೊಳಿಸುವ ಪ್ರಯತ್ನದಲ್ಲಿದ್ದು, ಅವರು ನಮ್ಮ ರಾಷ್ಟ್ರದ ಭವಿಷ್ಯದ ಆಶೆಯಾಗಿದೆ.
ಮೌಂಟ್ ಕಾರ್ಮೆಲ್ ಶಾಲೆಯ ಪರಮ ಉದ್ದೇಶವು ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು.

Leave a comment

Your email address will not be published. Required fields are marked *